


ಶ್ರೀಸಮೀರಾವತರ ದ್ವೈತಸಿದ್ಧಾಂತ ಪ್ರತಿಷ್ಠಾಪನಾಚಾರ್ಯ ಶ್ರೀಮದಾನಂದತೀರ್ಥ ಭಗವತ್ಪಾದರ ತತ್ವೋಪದೇಶಗಳನ್ನು ಹಾಗು ಶ್ರೀ ವಿಷ್ಣುತೀರ್ಥಾಚಾರ್ಯ ಸಂಸ್ಥಾನದಲ್ಲಿ ಯತಿಶ್ರೇಷ್ಠರಾಗಿ ಮೆರೆದ ಋಜುದೇವತೆ ಶ್ರೀ ಲಾತವ್ಯ ಚಕ್ರವರ್ತಿಗಳ ತೃತೀಯ ಅವತಾರ ಶ್ರೀವಾದಿರಾಜ ಗುರುಸಾರ್ವಭೌಮರ ತತ್ವೋಪದೇಶಗಳನ್ನೂ, ವಿಶೇಷವಾಗಿ ಶ್ರೀಸ್ವಾಪ್ನವೃಂದಾವನಾಖ್ಯಾನೋಕ್ತ ಮಹಿಮಾ ವಿಶೇಷಗಳನ್ನು ಹಾಗು ಇತರ ಜ್ಞಾನಿಗಳ ಗ್ರಂಥೋಪದೇಶವನ್ನು ಸಮಸ್ತ ಸಜ್ಜನ ವೃಂದಕ್ಕೆ ವಿಶೇಷವಾಗಿ ಶ್ರೀ ಗುರುರಾಜರ ಆರಾಧಕ ಭಕ್ತವೃಂದಕ್ಕೆ ಪ್ರಸಾರ ಮಾಡುವ ಸದುದ್ದೇಶದಿಂದ ಪ್ರತಿಷ್ಠಾನದ ಆಗಿನ ಗೌರವಾಧ್ಯಕ್ಷರಾಗಿದ್ದ ಪರಮಪೂಜ್ಯ ಶ್ರೀವಾದಿರಾಜಗುರುಪೀಠಾಧಿರೂಢ ಶ್ರೀ ೧೦೮ ಶ್ರೀ ಶ್ರೀ ವಿಶ್ವೋತ್ತಮತೀರ್ಥ ಶ್ರೀಪಾದಂಗಳವರು ಹಾಗು ಈಗಿನ ಅಧ್ಯಕ್ಷರಾದ ಶ್ರೀ ೧೦೮ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರ ಅಜ್ಞಾನುಸಾರ ಹಾಗು ಉಭಯ ಶ್ರೀಪಾದರ ಮಾರ್ಗದರ್ಶನದಲ್ಲಿ ಮೇಲ್ಕಂಡ ಸಮಿತಿಯ ಆಶ್ರಯದಲ್ಲಿ "ಶ್ರೀ ಭಾವಿಸಮೀರ ಗುರುಕುಲ"ವು ಶ್ರೀರಮಾತ್ರಿವಿಕ್ರಮದೇವರ ಹಾಗು ಭಾವಿಸಮೀರಶ್ರೀವಾದಿರಾಜರ ಸನ್ನಿಧಾನ ಸೋದಾಕ್ಷೇತ್ರದಲ್ಲಿ ೯ ಜೂನ್ ೨೦೦೬ ರಿಂದ ಪ್ರಾರಂಭಗೊಂಡಿದೆ.
ಸಂಪರ್ಕಿಸಲು ವಿಲಾಸ
ಶ್ರೀ ಭಾವಿಸಮೀರ ತತ್ವಪ್ರಸಾರಣ ಪ್ರತಿಷ್ಠಾನ,
೩೩೨೨, ೫ನೇ ಕ್ರಾಸ್, ’ಸಿ’ ಬ್ಲಾಕ್, ಗಾಯತ್ರಿನಗರ, ಬೆಂಗಳೂರು - ೫೬೦ ೦೨೧
ದೂರವಾಣಿ - ೦೮೦ ೨೩೪೨೧೦೬೨