

ಶ್ರೀಮನ್ಮಧ್ವಶಾಸ್ತ್ರ, ಭಾವಿಸಮೀರ ಶ್ರೀಮದ್ವಾದಿರಾಜ ಗುರುಸಾರ್ವಭೌಮರ ಮಹಿಮೋಪದೇಶಗಳು, ಪಂಚವೃಂದಾವನದ ಸನ್ನಿಧಿಯ ಅದ್ಭುತ ಮಹಿಮೆಗಳು 'ಸ್ವಾಪ್ನವೄಂದಾವನಾಖ್ಯಾನ'ದ ಅಪೂರ್ವ ರಹಸ್ಯಗಳು, ದಾಸಶ್ರೇಷ್ಠರಿಂದ ಕೋಂಡಾದಲ್ಪಟ್ಟಿ ಸಮೀರ-ಭಾವಿಸಮೀರರ ಉಪದೇಶಾಮೃತಗಳು ಇತ್ಯಾದಿಗಳ ಆಳವಾದ ಅಧ್ಯಯನ, ಸಂಶೋಧನೆಗಳಿಗಾಗಿಯೇ ಶ್ರೀ ವಿಶ್ವೋತ್ತಮ ತೀರ್ಥ ಶ್ರೀಪಾದಂಗಳವರಿಂದ ಸ್ತಾಪಿಸಲ್ಪಟ್ಟಂತಹ, ಪರಮಪೂಜ್ಯರ ಕನಸಿನ ಕೂಸಾದ 'ಶ್ರೀ ಭಾವಿಸಮೀರ ಗುರುಕುಲ' ಇದೀಗ ಎಳೆಯ ಕೂಸು. ನಿಮ್ಮೆಲ್ಲರ ಸಹಾಯ ಸಹಕಾರದಿಂದ ಈ ಕೂಸು ಪ್ರಬುದ್ಧವಾಗಿಬೆಳೆದು ಶ್ರೀ ವಾದಿರಾಜೀಯ ಸಾಹಿತ್ಯದ ಕಂಪನ್ನು ಎಲ್ಲಾ ಕಡೆಗೆ ಪಸರಿಸಬೇಕಾಗಿದೆ. ಕಲಿಪ್ರಭಾವ ದಿನದಿಂದ ದಿನಕ್ಕೆ ಬಲವಾಗುತ್ತಿರುವ ಮುಂದಿನ ದಶಕಗಳಲ್ಲಿ ಶ್ರೀವಾದಿರಾಜೀಯ ಗ್ರಂಥಗಳ ಅಧ್ಯಯನ, ಅರ್ಥಾನುಸಂಧಾನ ಮತ್ತು ಆಚರಣೆಗಳನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುವಂತಹ ಸಚ್ಛಾಸ್ತ್ರ ಸಂಪನ್ನ ವಿದ್ವಾಂಸರುಗಳ ನಿರ್ಮಾಣಕ್ಕೆನಿಮ್ಮೆಲ್ಲರ ಸಹಾಯ ಹಸ್ತ ಬೇಕಾಗಿದೆ.